ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಐ' ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಔ' ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿ ಸಂಧಿಯೆನ್ನುವರು. ಉದಾಹರಣೆ: ಲೋಕ + ಏಕವೀರ = ಲೋಕೈಕವೀರ ಏಕ +ಐಕ್ಯ=ಏಕೈಕ್ಯ ಜನ + ಐಕ್ಯ = ಜನೈಕ್ಯ ವನ + ಔಷಧಿ = ವನೌಷಧಿ ಜನ + ಔಷಧ = ಜನೌಷಧ ಜಲ + ಆಗ = ಜಲೌಘ